Note: This is a project under development. The articles on this wiki are just being initiated and broadly incomplete. You can Help creating new pages.

Difference between revisions of "Kn/ಯೋಗ"

From Ayurwiki
Jump to: navigation, search
(Created page with "ಯೋಗವು ಭಾರತದ ಸಾಧಕರ ಪುರಾತನವೂ ನಿತ್ಯನೂತನವೂ ಆದ ಬೋಧನಶಾಖೆಯಾಗಿದೆ . ಇದು ಆಧ...")
 
 
Line 28: Line 28:
 
#ಕ್ರಿಯಾಯೋಗ: ಕರ್ಮಯೋಗ (ತಪ), ಜ್ಞಾನಯೋಗ (ಸ್ವಾಧ್ಯಾಯ) ಮತ್ತು ಭಕ್ತಿಯೋಗ (ಈಶ್ವರ ಪ್ರಣಿಧಾನ)ಗಳ ಸಮ್ಮಿಶ್ರಣಕ್ಕೆ ಹೆಚ್ಚು ಒತ್ತು ನೀಡುತ್ತದೆ.
 
#ಕ್ರಿಯಾಯೋಗ: ಕರ್ಮಯೋಗ (ತಪ), ಜ್ಞಾನಯೋಗ (ಸ್ವಾಧ್ಯಾಯ) ಮತ್ತು ಭಕ್ತಿಯೋಗ (ಈಶ್ವರ ಪ್ರಣಿಧಾನ)ಗಳ ಸಮ್ಮಿಶ್ರಣಕ್ಕೆ ಹೆಚ್ಚು ಒತ್ತು ನೀಡುತ್ತದೆ.
  
[[ವರ್ಗ:ಅಭ್ಯಾಸಗಳು]]
+
[[Category:ಅಭ್ಯಾಸಗಳು]]

Latest revision as of 21:17, 25 May 2022

ಯೋಗವು ಭಾರತದ ಸಾಧಕರ ಪುರಾತನವೂ ನಿತ್ಯನೂತನವೂ ಆದ ಬೋಧನಶಾಖೆಯಾಗಿದೆ . ಇದು ಆಧ್ಯಾತ್ಮಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಮನುಷ್ಯನಿಗೆ ಸಹಾಯ ಮಾಡುತ್ತದೆ. ಯೋಗವು ಉಸಿರಾಟದ ತಂತ್ರಗಳು, ಆಸನ ಭಂಗಿಗಳು, ಕೈ ಸನ್ನೆಗಳು (ಮುದ್ರೆ), ದೇಹದ ಬಂಧಗಳು ಮತ್ತು ಧ್ಯಾನವನ್ನು ಬಳಸುತ್ತದೆ. ಇದು ಆರೋಗ್ಯ, ಮನಸ್ಸು, ಪ್ರಜ್ಞೆ ಮತ್ತು ಸಂತೋಷಗಳಲ್ಲಿ ಸುಧಾರಣೆ ಮಾಡುತ್ತದೆ.

ಯೋಗವು ಸಂಸ್ಕೃತದ ಪದವಾಗಿದ್ದು "ಸೇರಿಸುವಿಕೆ," "ಜೊತೆಗೂಡುವಿಕೆ" "ಒಕ್ಕೂಟ" "ಸಂಯೋಗ," ಎಂಬ ಅರ್ಥಗಳನ್ನು ಹೊಂದಿದೆ, ಪತಂಜಲಿ ಮಹರ್ಷಿಗಳು ಶಾಸ್ತ್ರೀಯ ಯೋಗದ ಪ್ರವರ್ತಕರು. ಅವರು ಯೋಗವನ್ನು "ಮನಸ್ಸಿನ ಅಲೆದಾಟದ ನಿಲುಗಡೆ" ಎಂದು ವ್ಯಾಖ್ಯಾನಿಸಿದರು.

ಯೋಗ ಮಾಡುವ ವ್ಯಕ್ತಿಯು ಆಸನ ಎಂದು ಕರೆಯಲ್ಪಡುವ ಒಂದು ಭಂಗಿಯಿಂದ ಇನ್ನೊಂದಕ್ಕೆ ಹೋಗುತ್ತಾನೆ. ಉದಾಹರಣೆಗೆ, "ಸೂರ್ಯನಮಸ್ಕಾರ"ವು 12 ಆಸನಗಳನ್ನು ಒಳಗೊಂಡಿದ್ದು ಒಂದರ ನಂತರ ಒಂದರಂತೆ, ಮತ್ತು ದೇಹ ಮತ್ತು ಆತ್ಮವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಪ್ರಮುಖ ಯೋಗ ಪದಗಳು (ಯೋಗದ ಎಂಟು ಅಂಗಗಳು)

  1. ಯಮ: ಧ್ಯಾನದ ಧನಾತ್ಮಕ ನಿಯಮಗಳು
  2. ನಿಯಮ: ಧ್ಯಾನದ ನಿಷೇಧಿತ ನಿಯಮಗಳು
  3. ಆಸನ: ದೈಹಿಕ ಭಂಗಿಗಳು ಮತ್ತು ಚಲನೆಗಳು
  4. ಪ್ರಾಣಾಯಾಮ: ಉಸಿರಾಟದ ತಂತ್ರಗಳು
  5. ಪ್ರತ್ಯಾಹಾರ: ಮನಸ್ಸನ್ನು ನಿಯಂತ್ರಿಸುವುದು
  6. ಧರಣ: ಒಳಮುಖವಾಗಿ ನೋಡುವುದು
  7. ಧ್ಯಾನ: ವಸ್ತುವಿನ ಧ್ಯಾನ
  8. ಸಮಾಧಿ: ವಸ್ತುವಿಲ್ಲದೆ ಧ್ಯಾನ


ಯೋಗದ ವಿಧಗಳು

  • ಮನಸ್ಸು ಮತ್ತು ದೇಹದ ಆಧಾರದ ಮೇಲೆ ವರ್ಗೀಕರಣ.
  1. ರಾಜಯೋಗ: ವ್ಯಾಯಾಮಕ್ಕೆ ಹೆಚ್ಚಿನ ಒತ್ತು ನೀಡುತ್ತದೆ
  2. ಹಠಯೋಗ: ಭೌತಿಕ ದೇಹದ ವ್ಯಾಯಾಮಕ್ಕೆ ಹೆಚ್ಚಿನ ಒತ್ತು ನೀಡುತ್ತದೆ.
  • ಆಧ್ಯಾತ್ಮಿಕ ಜೀವನ ವಿಧಾನದ ಆಧಾರದ ಮೇಲೆ ವರ್ಗೀಕರಣ.
  1. ಜ್ಞಾನಯೋಗ: ಇದು ಜ್ಞಾನದ ಮಾರ್ಗವಾಗಿದೆ.
  2. ಕರ್ಮಯೋಗ: ಇದು ಕೆಲಸದ ವಿಧಾನ.
  3. ಭಕ್ತಿಯೋಗ: ಅದೊಂದು ಪೂಜಾ ವಿಧಾನ.
  • ಇತರ ವಸ್ತುಗಳ ಮಾರ್ಗವನ್ನು ಆಧರಿಸಿ ವರ್ಗೀಕರಣ.
  1. ಸ್ವರ್ಯೋಗ: ಉಸಿರಾಟದ ಮೇಲೆ ಹೆಚ್ಚು ಒತ್ತು ನೀಡುತ್ತದೆ.
  2. ಕ್ರಿಯಾಯೋಗ: ಕರ್ಮಯೋಗ (ತಪ), ಜ್ಞಾನಯೋಗ (ಸ್ವಾಧ್ಯಾಯ) ಮತ್ತು ಭಕ್ತಿಯೋಗ (ಈಶ್ವರ ಪ್ರಣಿಧಾನ)ಗಳ ಸಮ್ಮಿಶ್ರಣಕ್ಕೆ ಹೆಚ್ಚು ಒತ್ತು ನೀಡುತ್ತದೆ.